ಕೇಂದ್ರ ಬಜೆಟ್ 2024 ಆಯವ್ಯಯ ವಿಶ್ಲೇಷಣಾತ್ಮಕ ವಿವರಣೆ ಗಳೊಂದಿಗೆ ನಿರೂಪಣೆ: ಶ್ರೀರಾಮ ಸುರೇಶ್ ಹೆಗಡೆ
ಕೇಂದ್ರೀಯ ಬಜೆಟ್: ಭಾರತೀಯ ಸಂವಿಧಾನದ 112 ನೇ ವಿಧಿಯ ಪ್ರಕಾರ, ವಾರ್ಷಿಕ ಹಣಕಾಸು ಹೇಳಿಕೆ ಎಂದೂ ಕರೆಯಲ್ಪಡುವ ಒಂದು ವರ್ಷದ ಕೇಂದ್ರ ಬಜೆಟ್, ಆ ನಿರ್ದಿಷ್ಟ ವರ್ಷದ ಸರ್ಕಾರದ ಅಂದಾಜು ಸ್ವೀಕೃತಿಗಳು ಮತ್ತು ವೆಚ್ಚಗಳ ಹೇಳಿಕೆಯಾಗಿದೆ.
ಸತತ ಮೂರನೇ ಬಾರಿಗೆ ಆಯ್ಕೆಯಾದ ನರೇಂದ್ರ ಮೋದಿ 3.0 ಭಾರತದ ನೂತನ ಎನ್ ಡಿ ಎ ಸರ್ಕಾರದ ಈ ಸಾಲಿನ ಬಜೆಟ್ ವಿಶೇಷ ವಾಗಿದ್ದು, ಕೇಂದ್ರ ಹಣ ಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಸತತ 7ನೇ ಬಾರಿಗೆ ಆಯವ್ಯಯ ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟ್ ಭಾಷಣದಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಬಡವರು, ಯುವಜನತೆ, ರೈತರು ಮತ್ತು ಮಹಿಳೆಯರನ್ನು ಕಲ್ಯಾಣಕ್ಕೆ ಒತ್ತು ನೀಡಲಾಗಿದೆ.ಚಿನ್ನ., ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ..
ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ.
ಕಾರ್ಮಿಕರ ಅನುಕೂಲಕ್ಕಾಗಿ ಇ-ಶ್ರಮ ಪೋರ್ಟ್ ಆರಂಭ, ಭೂ ಅಧಾರ್ ಮೂಲಕ ಭೂ ದಾಖಲೆ ಡಿಜಿಟಲೀಕರಣ, ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಣೆ.ಅಸ್ಸಾಂ, ಬಿಹಾರದಲ್ಲಿ ಪ್ರವಾಹ ನಿಯಂತ್ರಣಕ್ಕೆ 11,500 ಕೋಟಿ ರೂ. ಘೋಷಣೆ. ಜತೆಗೆ ಬಿಹಾರದ ಐತಿಹಾಸಿಕ ದೇಗುಲಗಳಿಗೆ ಆರ್ಥಿಕ ನೆರವು,ಮೆಡಿಕಲ್ ಕಾಲೇಜು ನಿರ್ಮಾಣ.ಗಯಾ, ಬೋಧ್‌ಗಯಾ ಅಭಿವೃದ್ಧಿ. ಒಡಿಶಾ ದೇಗುಲಗಳಿಗೆ ಸಹಾಯಹಸ್ತ. ಪ್ರವಾಸಿ ಸ್ಥಳವಾಗಿ ನಳಂದಾ ವಿವಿಯ ಅಭಿವೃದ್ಧಿ. ಬೋಧ್‌ಗಯಾ, ವಿಷ್ಣುಪಾದ ದೇವಸ್ಥಾನ ಕಾಶಿ ಮಾದರಿಯಲ್ಲಿ ಅಭಿವೃದ್ಧಿ.
ವಾತ್ಸಲ್ಯ ಯೋಜನೆ ಘೋಷಿಸಿದ ಕೇಂದ್ರ. ಈ ಮೂಲಕ ಬಾಲಕಿಯರಿಗೆ ಅನುಕೂಲ. ಈ ಯೋಜನೆ ಮೂಲಕ ಬಾಲಕಿಯರ ಹೆಸರಿನಲ್ಲಿ ಖಾತೆ ತೆರೆದು ಅವರ ಹೆಸರಿನಲ್ಲಿ ಹಣ ಜಮೆ.ಔಷಧ, ಮೆಡಿಕಲ್ ಉಪಕರಣಗಳು, ಮೂರು ಕ್ಯಾನ್ಸರ್ ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ.
ತೆರಿಗೆ ಲೆಕ್ಕ:
3 ಲಕ್ಷ ರೂ. ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ.
7-10 ಲಕ್ಷ ರೂ. ಶೇ. 5ರಷ್ಟು ತೆರಿಗೆ,
7-10 ಲಕ್ಷ ರೂ.ಗೆ ಶೇ. 10ರಷ್ಟು ತೆರಿಗೆ,
10-15 ಲಕ್ಷ ರೂ. ಆದಾಯಕ್ಕೆ ಶೇ. 15ರಷ್ಟು ತೆರಿಗೆ. 15 ಲಕ್ಷ ರೂ. ಮೇಲ್ಪಟ್ಟು ಶೇ. 30ರಷ್ಟು ತೆರಿಗೆ.
ರಾಜ್ಯಗಳಿಗೆ ಕೇಂದ್ರದಿಂದ ದೀರ್ಘಾವಧಿಯ ಸಾಲ ಘೋಷಣೆ. ಇದಕ್ಕಾಗಿ 1.5 ಲಕ್ಷ ಕೋಟಿ ರೂ. ಅನುದಾನ. ಈ ಮೂಲಕ ಮೂಲ ಸೌಕರ್ಯ ಅಭಿವೃದ್ಧಿಗೆ ನೆರವು. ಪ್ರವಾಹ ಶಾಶ್ವತ ನಿಯಂತ್ರಣಕ್ಕೂ ಅನುದಾನ ಘೋಷಣೆ.
ಮಹಿಳಾ ಸಬಲೀಕರಣಕ್ಕೆ ಕೇಂದ್ರ ಒತ್ತು ನೀಡಲಿದೆ. ಜತೆಗೆ ಪಿಎಂ ಸೂರ್ಯ ಘರ್ ಯೋಜನೆ ಮೂಲಕ 1 ಕೋಟಿ ಮನೆಗಳಿಗೆ ಉಚಿತ ಸೋಲಾರ್ ವಿದ್ಯುತ್ ಒದಗಿಸಲಾಗುವುದು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ 4ನೇ ಹಂತ ಜಾರಿಗೊಳಿಸಲಾಗುವುದು.
ಕೃಷಿಯಲ್ಲಿ ಉತ್ಪಾದನೆ ಹೆಚ್ಚಲು ಕೇಂದ್ರ ಯೋಜನೆ ರೂಪಿಸಲಿದೆ. ಜತೆಗೆ ಡಿಜಿಟಲೀಕರಣಕ್ಕೆ ಒತ್ತು.
ರೈತರಿಗೆ ನೈಸರ್ಗಿಕ ಕೃಷಿ ಮಾಡಲು ಅವಕಾಶ.
ಕೃಷಿ ಕೇತ್ರಕ್ಕೆ 1.52 ಲಕ್ಷ ಕೋಟಿ ರೂ. ಅನುದಾನ
ಪಿಎಂ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣ. ಗ್ರಾಮೀಣಾಭಿವೃದ್ಧಿ 2.66 ಲಕ್ಷ ಕೋಟಿ ರೂ.
ದೇಶದಲ್ಲಿ 12 ಇಂಡಸ್ಟ್ರೀಯಲ್ ಪಾರ್ಕ್‌ಗಳ ನಿರ್ಮಾಣ.ಆಂಧ್ರ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ.
ರೈತರಿಗಾಗಿ 10 ಸಾವಿರ ಬಯೋ ಸಂಶೋಧನಾ ಕೇಂದ್ರ ಸ್ಥಾಪನೆ.ಮೂರು ಉದ್ಯೋಗ ಕೌಶಲ್ಯ ಯೋಜನೆ ಜಾರಿಗೊಳಿಸಲಾಗುತ್ತದೆ. ಮಹಿಳೆಯರಿಗೆ ಕೌಶಲಾಭಿವೃದ್ಧಿ ಯೋಜನೆ.ವಿದ್ಯಾರ್ಥಿಗಳಿಗೆ, ಯುವ ಜನತೆಗಾಗಿ ಯೋಜನೆ.
ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ, 20 ಲಕ್ಷ ಯುವಕರಿಗೆ ಕೌಶಲ್ಯ ಆಧಾರಿತ ಉದ್ಯೋಗ ನೀಡುವ ಯೋಜನೆ.
2024-2025ರ ಒಟ್ಟು ವೆಚ್ಚ 48,20,512 ಕೋಟಿ ರೂ.
ಉತ್ಪಾದಕತೆ ಮತ್ತು ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವ, ಉದ್ಯೋಗ ಮತ್ತು ಕೌಶಲ್ಯ, ಅಂತರ್ಗತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರ ಅಭಿವೃದ್ಧಿ, ಇಂಧನ ಭದ್ರತೆಗಳು, ಇನ್ಫ್ರಾ, ನಾವೀನ್ಯತೆ, ಆರ್ & ಡಿ, ಮುಂದಿನ ಪೀಳಿಗೆಯಸುಧಾರಣೆಗಳ ಮೇಲೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.
No comments:
Post a Comment