ವಿಷಯ ಸಂಗ್ರಹ ಲೇಖನ: ಶ್ರೀರಾಮ ಸುರೇಶ ಹೆಗಡೆ. ಅಂಬಾಗಿರಿ ಶಿರಸಿ.
ವಿಶೇಷ: IDY 2024 ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮಹಿಳಾ ಸಬಲೀಕರಣ ಕಾರ್ಯಸೂಚಿ.
ಸ್ತ್ರೀ ಮತ್ತು ಯೋಗ
https://habit.yoga/Shriram_qr1wh
ಯೋಗ ದೇಹದ ಎಲ್ಲ ಅಂಗ ಗಳನ್ನು ಸ್ಥಿರವಾಗಿರಿಸಿ ಸಮರ್ಪಕವಾಗಿ ಕೆಲಸ ಮಾಡುವಲ್ಲಿ ಇದು ಸಹ ಕಾರಿಯಾಗಿದೆ. ಯೋಗ ಸರ್ವ ರೋಗ ನಿವಾರಕ ಎಂಬುದು ತಿಳಿದ ಸಂಗತಿ.ಗರ್ಭದಲ್ಲಿ ಬೆಳೆಯುವ ಮಗುವಿನ ಆರೋಗ್ಯದ ಜೊತೆಗೆ ಅವರ ರೂಪ ಸೌಂದರ್ಯ ವ್ಯಕ್ತಿತ್ವ ಲಾವಣ್ಯ ಹೆಚ್ಚಿಸುತ್ತದೆ.
ಯೋಗಭ್ಯಾಸ ಸ್ತ್ರೀ ಹಾಗೂ ಪುರುಷರಿಬ್ಬರಿಗೂ ಪ್ರಯೋಜಕ. ಪುರುಷರೊಂದಿಗೆ ಹೋಲಿಸಿದಾಗ ಪ್ರಕೃತಿ ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದೆ. ಉದಾಹರಣೆಗೆ ಋತುಚಕ್ರ, ಗರ್ಭಧಾರಣೆ, ಮಕ್ಕಳ ಲಾಲನೆ, ಪಾಲನೆ, ಪೋಷಣೆ ಮುಂತಾದವುಗಳು. ಸ್ತ್ರೀ ಜೀವನದಲ್ಲಿ ಅನೇಕ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾಗಿರುತ್ತದೆ. ಮಗಳಾಗಿ , ಅಕ್ಕನಾಗಿ, ಮಡದಿಯಾಗಿ, ತಾಯಿಯಾಗಿ ಹಾಗೂ ಗೆಳತಿಯಾಗಿ. ಎಲ್ಲ ಸಂದರ್ಭಗಳಲ್ಲಿ ಸಮಾಜ ಅವಳಿಂದ ಹೆಚ್ಚಿನ ಜವಾಬ್ದಾರಿಯನ್ನು ನಿರೀಕ್ಷಿಸುತ್ತದೆ.
ಈ ಆಧುನಿಕ ಯುಗದಲ್ಲಿ ಮೇಲೆ ಹೇಳಿದ ಜವಾಬ್ದಾರಿಗಳೊಂದಿಗೆ ಎಲ್ಲ ರಂಗಗಳಲ್ಲಿಯೂ ವೈದ್ಯ, ನ್ಯಾಯವಾದಿ, ರಾಜಕಾರಣಿ, ಉಪನ್ಯಾಸಕಿ ಹೀಗೆ ಅನೇಕ ಹುದ್ದೆಗಳನ್ನು ಮಹಿಳೆಯರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ವಿವರಿಸಿದಂತೆ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತಾಗ ದೈಹಿಕ ಮತ್ತು ಮಾನಸಿಕ ಆಯಾಸ ಆಗುವುದು. ಈ ಆಯಾಸಕ್ಕೆ ಯೋಗ ಕ್ರಮಬದ್ಧವಾದ ಪರಿಹಾರವನ್ನು ಹೊಂದಿದೆ.
ಯೋಗಭ್ಯಾಸ ಮಹಿಳೆಯ ಗುರಿಗಳನ್ನು ತಲುಪುವಲ್ಲಿ ಸಹಕರಿಸುವುದರ ಜೊತೆಗೆ ಅವಳ ರೂಪ ವ್ಯಕ್ತಿತ್ವ ಸೌಂದರ್ಯ ತೇಜಸ್ಸು ವರ್ದಿಸಲು ಸಹಾಯ ಮಾಡುತ್ತದೆ. ದೇಹದ ಬೇರೆ ಬೇರೆ ವಿಭಾಗಗಳಾದ ಜೀರ್ಣಾಂಗ ವ್ಯೂಹ, ಶ್ವಾಸಕೋಶ ಹಾಗೂ ಶ್ವಾಸ ನಾಳಗಳು, ನೆರವ್ಯೂಹ ಹಾಗೂ ಬೇರೆಬೇರೆ ಗ್ರಂಥಿಗಳನ್ನು ಚುರುಕುಗೊಳಿಸಿ ಈ ಎಲ್ಲಾ ವಿಭಾಗಗಳೂ ಸಮತೋಲನದಲ್ಲಿ ಕೆಲಸ ಮಾಡುವಂತೆ ಮಾಡುತ್ತದೆ. ಸ್ತ್ರೀ ಜೀವನದ ಪ್ರಮುಖ ಘಟ್ಟಗಳಲ್ಲಿ ಯೋಗ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಇಲ್ಲಿ ಗಮನಿಸೋಣ.
ಸ್ತ್ರೀ ಜೀವನದ ಪ್ರಮುಖ ಮೈಲುಗಳು :
🧚ಋತುಚಕ್ರದ ಪ್ರಾರಂಭ
🧚ಗರ್ಭಧಾರಣೆ
🧚ಹಾಗೂ ಹೆರಿಗೆ
🧚ಮತ್ತು ನಿಲ್ಲುವಿಕೆ ಎಂದು ವಿಂಗಡಿಸಬಹುದು.
ಋತುಚಕ್ರದ ಪ್ರಾರಂಭದಲ್ಲಿ ಸ್ತ್ರೀ ಶರೀರ ಶಾಸ್ತ್ರದಲ್ಲಿ ಅನೇಕ ಬದಲಾವಣೆಗಳನ್ನು ನೋಡಬಹುದು. ಶರೀರದಲ್ಲಿ ಕ್ಷೀಪ್ರ ಬದಲಾವಣೆ ಹಾಗೂ ಪ್ರತಿ 28 ದಿನಗಳಿಗೊಮ್ಮೆ ರಕ್ತಸ್ರಾವ ಪ್ರಾರಂಭವಾಗುತ್ತದೆ. ಪಿಟ್ಯುಟರಿ ಗ್ರಂಥಿಯಿಂದ ಬಿಡುಗಡೆಯಾಗುವ ಹಾರ್ಮೋನುಗಳು ಋತುಚಕ್ರದ ಸಮಯದಲ್ಲಿ ಜನನಾಂಗಗಳಲ್ಲಿ ಆಗುವ ಬದಲಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
🧘ಯೋಗಾಸನ ಹಾಗೂ ಪ್ರಾಣಾಯಾಮಗಳು ಆರೋಗ್ಯಪೂರ್ಣ ಸ್ತ್ರೀತ್ವಕ್ಕೆ ಕಾಲಿಡಲು ಎಲ್ಲಾ ವಿಧಗಳಲ್ಲಿಯೂ ಸಹಾಯ ಮಾಡುತ್ತದೆ. ತಲೆ ಕೆಳಗೆ ಮಾಡುವ ಹಾಗೂ ಹಿಂದೆ ಬಗ್ಗುವ ಯೋಗಾಸನಗಳು ಪಿಟ್ಯುಟರಿ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಮುಂದೆ ಬಾಗುವ ಆಸನಗಳಿಂದ ಕಿಬ್ಬೊಯ ಭಾಗಕ್ಕೆ ಶುದ್ಧವಾದ ರಕ್ತ ಸರಬರಾಜುವಾಗಲು ಸಹಾಯವಾಗುತ್ತದೆ. ನಿಂತು ಮಾಡುವ ಆಸನಗಳು ದೇಹಕ್ಕೆ ಸರಿಯಾದ ಬೆಳವಣಿಗೆ ಹಾಗೂ ಗಾತ್ರವನ್ನು ಒದಗಿಸಲು ಸಹಾಯ ಮಾಡುತ್ತದೆ.
🧘ದೈಹಿಕ ಮಾನಸಿಕ, ನೈತಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಯೋಗಾ ಸಹಾಯ ನೀಡಿ ಪರಿಶುದ್ಧವಾದ ಜವಾಬ್ದಾರಿಯುತವಾದ ಜೀವನವನ್ನು ಪ್ರಾರಂಭಿಸಲು ದಾರಿ ತೋರಿಸುತ್ತದೆ. ಯೋಗಭ್ಯಾಸ ಆರಂಭಿಸಲು 12 ರಿಂದ 14 ಅತ್ಯುತ್ತಮವಾದ ವಯಸ್ಸು. ಮುಟ್ಟಿನ ತೊಂದರೆಗಳು ಅನೇಕ ಸ್ತ್ರೀಯರಲ್ಲಿ ಕಂಡುಬರುತ್ತದೆ. ಈ ತೊಂದರೆಗಳು ಬರದೇ ಇದ್ದ ಹಾಗೆ ಯೋಗಾಭ್ಯಾಸ ನೋಡಿಕೊಳ್ಳುತ್ತದೆ ಹಾಗೂ ಬಂದ ತೊಂದರೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಮುಟ್ಟಾದಾಗ ಅಂದರೆ ರಕ್ತಸ್ರಾವ ಆಗುತ್ತಾ ಇರುವಾಗ ಯೋಗಾಸನಗಳನ್ನು ಮಾಡಬಾರದು.ಗರ್ಭ ಧರಿಸುವುದು ಹಾಗೂ ಆರೋಗ್ಯವಂತವಾದ ಮಗುವಿನ ಜನ್ಮ ಕೊಡುವುದು ಸ್ತ್ರೀಯ ಪ್ರಮುಖ ಕನಸುಗಳಲ್ಲಿ ಒಂದು. ಈ ಕನಸು ನನಸಾಗಲು ಉಳಿದೆಲ್ಲ ಅಂಶಗಳ ಜೊತೆ ಯೋಗಭ್ಯಾಸವು ಸಹ ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭ ಧರಿಸಿದಾಗ ಕೆಲವು ಆಯ್ದ ಆಸನಗಳು ಪ್ರಾಣಾಯಾಮಗಳನ್ನು ಮಾಡಬಹುದು. ಹೆರಿಗೆ ಆದ ನಂತರ ಹೊಟ್ಟೆ ಹಾಗೂ ಕಿಬ್ಬೊಟ್ಟೆ, ಮೀನಖಂಡ ಮೊದಲಿನ ಸ್ಥಿತಿಗೆ ಬರಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಾಯ ಮಾಡುತ್ತದೆ ಈ ಎಲ್ಲಾ ಸಂದರ್ಭದಲ್ಲಿ ಕೂಡ ಸ್ತ್ರೀ ಯೋಗ ಶಿಕ್ಷಕರ ಅಥವಾ ಯೋಗ ವೈದ್ಯರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಬೇಕು.
🧘ಸಾಮಾನ್ಯವಾಗಿ 45 ರಿಂದ 50 ವರ್ಷ ವಯಸ್ಸಿನಲ್ಲಿ ಮುಟ್ಟು ನಿಲ್ಲುತ್ತದೆ. ಈ ಸಂದರ್ಭದಲ್ಲಿ ಸ್ತ್ರೀಯರಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಈ ಬದಲಾವಣೆಗಳಿಗೆ ಮನಸ್ಸು ಹಾಗೂ ಹಾರ್ಮೋನುಗಳ ಅಸಮತೋಲನ ಕಾರಣವಿರಬಹುದು. ರಕ್ತದ ಒತ್ತಡದಲ್ಲಿ ಬದಲಾವಣೆ, ಸಂದು ನೋವು, ತಲೆನೋವು, ನಿದ್ರಾಹೀನತೆ , ಬೊಜ್ಜು ಮುಂತಾದ ತೊಂದರೆಗಳನ್ನು ಕಾಣಬಹುದು. ಯೋಗ ಅಭ್ಯಾಸ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮ ನೀಡುವುದರಿಂದ ಈ ಸಮಸ್ಯೆಗಳಿಗೆ ಯೋಗ ಚಿಕಿತ್ಸೆಯಲ್ಲಿ ಸರಿಯಾದ ಉತ್ತರ ಲಭ್ಯ.
🧘ಯೋಗ ವಯಸ್ಸಾದವರಿಗೆ ಒಂದು ಕೊಡುಗೆ. ಸರಳಾಸನಗಳು ,ಪ್ರಾಣಾಯಾಮ, ಕ್ರಿಯೆಗಳು, ಧ್ಯಾನ ಇವುಗಳ ಅಭ್ಯಾಸ ಪ್ರಪಂಚದ ಎಲ್ಲರನ್ನೂ ಲಿಂಗ ಜಾತಿ ವಯಸ್ಸಿನ ಎಲ್ಲೆಯನ್ನು ಮೀರಿ ಸಂತೋಷವಾಗಿ ಆರೋಗ್ಯ ಯುತವಾಗಿರಿಸುತ್ತದೆ.
ಮಹಿಳೆಯರಿಗಾಗಿ ಯೋಗಾಭ್ಯಾಸ:
ವೃಕ್ಷಾಸನ
ಬದ್ಧಕೋನಾಸನ(Bound Angle Pose)
ಪರಿವೃತ್ತ ಸುಖಾಸನ.
ನೌಕಾಸನ
ವಿಪರೀತಕರಣಿ
ಪಶ್ಚಿಮೋತ್ತನಾಸನ (ಮುಂದಕ್ಕೆ ಕುಳಿತಿರುವ ಬಾಗುವಿಕೆ)
🧘ಬದ್ಧ ಕೋನಸಾನ (ಚಿಟ್ಟೆ ಭಂಗಿ)ಈ ಆಸನವು ಒಳ ತೊಡೆಗಳು, ತೊಡೆಸಂದು ಮತ್ತು ಮೊಣಕಾಲುಗಳಿಗೆ ಉತ್ತಮ ವಿಸ್ತರಣೆಯನ್ನು ಒದಗಿಸುತ್ತದೆ, ಕರುಳು ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಗರ್ಭಿಣಿಯರು ಮತ್ತು ಕುಟುಂಬವನ್ನು ಪ್ರಾರಂಭಿಸಲು ಯೋಜಿಸುತ್ತಿರುವವರು ಈ ಆಸನದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ ಏಕೆಂದರೆ ಇದು ಫಲವತ್ತತೆಯನ್ನು ಸುಧಾರಿಸುತ್ತದೆ ಮತ್ತು ಸುಗಮ ಗರ್ಭಧಾರಣೆಯನ್ನು ಸುಗಮಗೊಳಿಸುತ್ತದೆ. ಆದಾಗ್ಯೂ, ದೀರ್ಘಕಾಲದ ಮೊಣಕಾಲು ನೋವು ಅಥವಾ ತೊಡೆಸಂದು ಗಾಯ ಹೊಂದಿರುವ ಜನರು ಈ ಭಂಗಿಯನ್ನು ಅಭ್ಯಾಸ ಮಾಡಬಾರದು.
🧘ಅರ್ಧ ಚಕ್ರಾಸನ (ನಿಂತಿರುವ ಹಿಮ್ಮುಖ ಬಾಗಿ)
ಈ ಹಿಂದುಳಿದ ಬಾಗುವ ಭಂಗಿಯು ಇಡೀ ದೇಹವನ್ನು ವಿಸ್ತರಿಸುತ್ತದೆ, ಇದು ತೋಳು ಮತ್ತು ಭುಜದ ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ ಮತ್ತು ಬೆನ್ನುಮೂಳೆಗೆ ಉತ್ತಮ ಹಿಗ್ಗುವಿಕೆಯನ್ನು ಒದಗಿಸುತ್ತದೆ. ಕಡಿಮೆ ಬೆನ್ನು ನೋವನ್ನು ಕಡಿಮೆ ಮಾಡಲು ಮತ್ತು ಉಸಿರಾಟದ ಅಸ್ವಸ್ಥತೆಗಳನ್ನು ಗುಣಪಡಿಸಲು ಇದು ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ.
🧘ಯೋಗ ನಿದ್ರೆ.
ಮೇಲೆ ನೇರವಾಗಿ ಮಲಗುವುದು, ಕಣ್ಣುಗಳನ್ನು ಮುಚ್ಚುವುದು ಮತ್ತು ಇಡೀ ದೇಹವನ್ನು ವಿಶ್ರಾಂತಿ ಮಾಡಲು ಪ್ರಯತ್ನಿಸುವುದನ್ನು ಒಳಗೊಂಡಿರುತ್ತದೆ.
No comments:
Post a Comment